== ಜಟ್ರೋಫಾ ಎಣ್ಣೆ == ಜಟ್ರೋಫಾ ಎಣ್ಣೆಯನ್ನು ಜಟ್ರೋಫಾ ಬೀಜದಿಂದ ತೆಗೆಯಲಾಗುತ್ತದೆ. ಜಟ್ರೋಫಾ ಒಂದು ಪೊದೆ ಗಿಡ. ಗಿಡಕ್ಕೆ ಹಲವಾರು ಕೊಂಬೆಗಳಿರುತ್ತವೆ. ಇದು ಯುಫೋರ್ಬಿಯೇಸಿಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರಹೆಸರು 'ಜಟ್ರೋಫಾ ಕುರ್ಕಸ್'().ಇದರಲ್ಲಿ ಹಲವಾರು ಪ್ರಭೇದಗಳಿವೆ. ಜಟ್ರೋಫಾ ಗಿಡದ ಉಗಮಸ್ಥಾನ ದಕ್ಷಿಣ ಅಮೇರಿಕ ಆಗಿದೆ. ಪೋರ್ಚೂಗೀಸರಿಂದ ಇದು ಆಫ್ರಿಕಾ, ಏಷ್ಯಾ ದೇಶಗಳಿಗೆ ವ್ಯಾಪ್ತಿಸಿದೆ. ಎಲ್ಲಾ ನೆಲಗಳಲ್ಲಿ ಈ ಗಿಡ ಬೆಳೆಯುತ್ತದೆ. ಸಾಗುವಳಿಗೆ ಅನಾನುಕುಲವಾದ ಭೂಮಿಯಲ್ಲಿ ಇದ್ದರೂ ಬೇಸಾಯ ಮಾಡಬಹುದು. ಮಳೆ ಅಭಾವ ಪರಿಸ್ಥಿತಿಯನ್ನು ಇದು ತಡಕೊಳ್ಳುತ್ತದೆ. ಜಟ್ರೋಫಾ ಎಣ್ಣೆಯನ್ನು ಜೈವಿಕ ಡಿಸೇಲ್( ) ತಯಾರು ಮಾಡುವುದ್ದಕ್ಕೆ ಉಪಯೋಗಿಸುತ್ತಾರೆ. ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಯೋಗ್ಯವಲ್ಲ. ಜೈವಿಕ ಡಿಸೇಲ್ ಸಲುವಾಗಿ ಜಟ್ರೋಫಾ ತೋಟೆಗಳನ್ನು ಬೆಳಸುವುದಕ್ಕೆ ಭಾರತ ಪ್ರಭುತ್ವ ಪ್ರೋತ್ಸಾಹ ಕೊಡುತ್ತಿದೆ. == ಬೇರೆ ಭಾಷೆಗಳಲ್ಲಿ ಜಟ್ರೋಫಾ ಹೆಸರು == ಸಂಸ್ಕೃತ=ಕಾನನ್ ಎರಂಡ್( ),ಪರ್ವತ್ ಎರಂಡ್( ) ಹಿಂದಿ=ಸಫೆದ್ ಎರಂಡ್( ).ಬಾಗ್ ಎರಂಡ್( ) ಮಲಯಾಳಂ=ಕಟ್ಟವೆನಕ್ಕು() ತಮಿಳು=ಅಡ್ಡಲಾಲ್ ಕಟ್ಟಮನಕು( ) ತೆಲುಗು=ನೇಪಾಲಂ(),ಅಡವಿ ಆಮುದಂ( ) ಗುಜರಾತ್,ರಾಜಸ್ಥಾನ=ರತನ್ ಜ್ಯೊತ್( ),ಜಂಗ್ಲಿ ಎರಂಡ್( ) ಮರಾಠಿ=ವೊಗ್ಲಿ ಎರಂಡಿ( ) ಒರಿಯಾ=ಜಹಜಿಗಬ() ಅಸ್ಸಾಮಿ=ಬೊಂಗಲಿ() ಇಂಗ್ಲೀಷ್=ಫ್ಜಿಕ್ ನಟ್( ),ಪರ್ಜಿಂಗ್ ನಟ್( ) == ಸಾಗುವಳಿಗೆ ಅನುಕೂಲವಾದ ರಾಷ್ಟ್ರಗಳು == ಈ ಗಿಡಗಳು ದೇಶದ ಎಲ್ಲಾ ಕಡೆ ಕಾಣಿಸಿದರೂ, ಈ ಕೆಳಗಿನ ರಾಜ್ಯಗಳು ಜಟ್ರೋಫಾ ಬೇಸಾಯಕ್ಕೆ ಅನುಕೂಲವೆಂದು ಪರಿಗಣಿಸಲಾಗಿದೆ. ಆಂಧ್ರ ಪ್ರದೇಶ ಗುಜರಾತ್ ರಾಜಸ್ಥಾನ ಕರ್ನಾಟಕ ಮಹಾರಾಷ್ಟ್ರ ಭಾರತ ದೇಶ ಜಟ್ರೋಫಾ ತೋಟೆಗಳನ್ನು ಬೆಳಸುವುದಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತದೆ. == ಎಣ್ಣೆಯನ್ನು ಉತ್ಪಾದನೆ ಮಾಡುವುದು == ಬಿತ್ತನೆಯಲ್ಲಿ ಪ್ರತಿಶತ ೩೦-೪೦% ಎಣ್ಣೆ ಇರುತ್ತದೆ. ವೊದಲು ಕಾಯಿಗಳನ್ನು ಚಕ್ಕಿ ಅಥಾವಾ ಡಿಕಾರ್ಡಿಕೇಟರು()ನಲ್ಲಿ ಹಾಕಿ, ನಡಿಸಿ ಬಿತ್ತನೆ ಮೇಲಿದ್ದ ಹೊಟ್ಟು/ಸಿಪ್ಪೆ()ಬೇರ್ಪಡಿಸಿ, ಹೊಟ್ಟು/ಸಿಪ್ಪೆ ಯನ್ನು ವಿಂಗಡಿಸಲಾಗುತ್ತದೆ. ಹೋಟ್ಟು ತೆಗೆದ ಕಾಳುಗಳನ್ನು ನೀರಿನ ಆವಿ()ಯಿಂದ ಚೆನ್ನಾಗಿ ಬೇಯಿಸಿ, ಆಮೇಲೆ ಬೇಯಿಸಿದ ಕಾಳುಗಳನ್ನು ಎಕ್ಸುಪೆಲ್ಲರು ಯಂತ್ರಗಳಲ್ಲಿ ಹಾಕಿ ಎಣ್ಣೆಯನು ತೆಗೆಯಲಾಗುತ್ತದೆ. ಹೆಚ್ಚಿನ ಎಣ್ಣೆಯ ಇಳುವರಿಗಾಗಿ ಕಾಳು()ಗಳನ್ನು ಎರಡು ಬಾರಿ ಕ್ರಷಿಂಗ್( ) ಮಾಡಬೇಕಾಗುತ್ತದೆ. ಹಿಂಡಿ( )ಯಲ್ಲಿ ಇನ್ನು ಎಣ್ಣೆ ಉಳಿದಿರುತ್ತದೆ. ಎಕ್ಸುಪೆಲ್ಲರು ಯಂತ್ರ ಸಹಾಯದಿಂದ ಎಣ್ಣೆ ತೆಗೆದರೆ ಪ್ರತಿಶತ ೨೯% ಎಣ್ಣೆ ಬರುತ್ತದೆ. ಅದೇ ಸಾಲ್ವೆಂಟ್ ಪ್ಲಾಂಟ್ನಲ್ಲಿ ನಡೆಸಿದರೆ ೩೯% ವರಗೆ ಎಣ್ಣೆಯನ್ನು ಉತ್ಪಾದನೆ ಮಾಡುವುದಕ್ಕೆ ಆಗುತ್ತದೆ. ಎಣ್ಣೆ ತೆಗೆದ ಹಿಂಡಿಯನ್ನು ಎರುಬು()ವನ್ನಾಗಿ ಉಪಯೋಗಿಸಬಲ್ಲದು. == ಎಣ್ಣೆಯ ಗುಣ ಗಣಗಳು == ಜಟ್ರೋಫಾ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಶೇಂಗಾ ಎಣ್ಣೆಯಲ್ಲಿರುವಂತೆ ಇರುತ್ತವೆ. ಆದರೆ ಈ ಎಣ್ಣೆಯನ್ನು ಅಡಿಗೆ ಎಣ್ಣೆಯಾಗಿ ಬಳಸುವುದಕ್ಕೆ ಆಗುವುದಿಲ್ಲ.ಏಕೆಂದರೆ ಇದರಲ್ಲಿ ಕೆಲವು ಟಾಕ್ಸಿನ್(ವಿಷ) ಪದಾರ್ಥಗಳು ಇವೆ. ಅದರಿಂದ ಜಾಟ್ರೋಫಾ ಎಣ್ಣೆ ಬಳಸುವುದಕ್ಕೆ ಯೋಗ್ಯವಲ್ಲ. ಎಣ್ಣೆಯಲ್ಲಿರುವ ಫ್ಯಾಟಿ(ಕೊಬ್ಬಿನ)ಆಮ್ಲಗಳು ಎಣ್ಣೆಯ ಭೌತಿಕ ಮತ್ತು ರಸಾಯನಿಕ ಲಕ್ಷಣಗಳು == ಎಣ್ಣೆಯ ಉಪಯುಕ್ತತೆಗಳು == ಜೈವಿಕ ಡಿಜೆಲ್/ಇಂಧನ ಉತ್ಪಾದನೆ ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಮೇಣಬೆಳಕು ()ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಸಾಬೂನು ಕಾರ್ಖಾನೆಯಲ್ಲಿ ಉಪಯೋಗಿಸುತ್ತಾರೆ. ಕೀಲೆಣ್ಣೆ ()ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಆಲ್ಕೈಡ್ () ತಯಾರು ಮಾಡುವುದರಲ್ಲಿಯು ವಿನಿಯೋಗ ಮಾಡುತ್ತಾರೆ. == ಬಾಹ್ಯಕೊಂಡಿಗಳು == 2014-03-27 ವೇಬ್ಯಾಕ್ ಮೆಷಿನ್ ನಲ್ಲಿ.